Mangaluru Smart City
Smart city project of Mangaluru focus on development of waterfronts, roads & improvement of fisheries to promote trade and thus help in improvement of economy.Being a coastal city, waterfront development aims at connecting communities to water.
Plan for each investment along the rivers and wide seashores in Mangaluru is to encourage activity, unleash vitality & increase land value while providing places for people to enjoy.
The need of infrastructural development is to show a great deal of progress in providing best liveable space & public spaces for people. When the smart city roll out is done successfully, our coastal pride Mangaluru can open up globally because of vast natural resources and huge man power.
ಮಂಗಳೂರು ಸ್ಮಾರ್ಟ್ ಸಿಟಿ
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯು ಜಲಾಭಿಮುಖಿ ಪ್ರದೇಶಗಳ ಹಾಗೂ ರಸ್ತೆಗಳ ಅಭಿವೃದ್ಧಿ, ಮೀನುಗಾರಿಕಾ ವಲಯದಲ್ಲಿ ಪ್ರಗತಿ ಮುಂತಾದ ಯೋಜನೆಗಳ ಮೂಲಕ ಮಂಗಳೂರಿನ ವ್ಯಾಪಾರ ಹಾಗೂ ತನ್ಮೂಲಕ ಆರ್ಥಿಕತೆಯ ಸಂಪೂರ್ಣ ಪ್ರಗತಿಯ ಗುರಿಯನ್ನಿಟ್ಟುಕೊಂಡಿದೆ.
ಉದ್ದಕ್ಕೂ ಕರಾವಳಿಯನ್ನು ಹೊಂದಿರುವ ನಗರವಾದ ಮಂಗಳೂರಿನ ಜಲಾಭಿಮುಖಿ ನಗರಾಭಿವೃದ್ಧಿ ಯೋಜನೆಯು ಜನಸಮೂಹವನ್ನು ಜಲಸಂಪತ್ತಿನೊಂದಿಗೆ ಜೋಡಿಸುವ ಉದ್ದೇಶವನ್ನಿಟ್ಟುಕೊಂಡಿದೆ. ನದಿಗಳುದ್ದಕ್ಕೂ, ಸಮುದ್ರತೀರಗಳುದ್ದಕ್ಕೂ ಮಾಡಹೊರಟಿರುವ ಹೂಡಿಕೆಯ ಉದ್ದೇಶವು ಇಲ್ಲಿನ ಎಲ್ಲಾ ಚಟುವಟಿಕೆಗಳನ್ನು ಉತ್ತೇಜಿಸುವುದು ಹಾಗೂ ಭೂಮೌಲ್ಯವರ್ಧನೆಯೊಂದಿಗೆ ಜನರಿಗೆ ಮನೋರಂಜನೆಗೂ ಸ್ಥಳಾವಕಾಶವನ್ನೊದಗಿಸುವುದಾಗಿದೆ.
ಜನರಿಗೆ ವಾಸಯೋಗ್ಯ ಸ್ಥಳಗಳನ್ನು ಹಾಗೂ ಸಾರ್ವಜನಿಕ ಸ್ಥಳಗಳನ್ನೊದಗಿಸುವುದರಲ್ಲಿ ಸಾಕಷ್ಟು ಪ್ರಗತಿಯನ್ನು ತೋರಿಸುವುದು ಮೂಲಸೌಕರ್ಯಗಳ ಅಭಿವೃದ್ಧಿ ಯೋಜನೆಯ ಅನಿವಾರ್ಯತೆಯಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದಾಗ ನಮ್ಮ ಹೆಮ್ಮೆಯ ಕರಾವಳಿ ನಗರವಾದ ಮಂಗಳೂರು ತನ್ನ ಅಗಾಧ ನೈಸರ್ಗಿಕ ಸಂಪತ್ತು ಹಾಗೂ ಮಾನವಸಂಪನ್ಮೂಲಗಳಿಂದ ಜಗತ್ತಿಗೇ ತನ್ನನ್ನು ತೆರೆದಿಡುವಂತಾಗುತ್ತದೆ.